FLASH

കുമ്പള സബ്ജില്ല കായിക മാമാങ്കത്തിന് തുടക്കമായി.ചിത്രങ്ങൾ കാണുക......

RESOURCE

ಎಬೋಲಾ 
ಏನಿದು ಎಬೋಲಾ ?
   Ebola virus disease (EVD) ಎಂಬುದು ಎಬೋಲಾದ ಪೂರ್ಣ ಪೂರ್ಣ ಹೆಸರು . ವೈರಾಣು ಗಳಿಂದ ಹಬ್ಬುವ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ. 1976 ರಲ್ಲಿ ಪಶ್ಚಿಮ ಆಫ್ರಿಕಾ ದೇಶ ಸೂಡಾನ್ ನ ಝೇರೆ ಎಂಬಲ್ಲಿ ಮೊದಲು ಈ ವೈರಾಣು ಕಾಣಿಸಿಕೊಂಡಿತ್ತು . ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಎಂಬುಕು ಎಂಬ ಎಬೋಲಾ ನದಿ ತಟ ಭಾಗದಲ್ಲೂ ಇದೇ ಸಂದರ್ಭ ವೈರಾಣು ಕಾಣಿಸಿಕೊಂಡಿದ್ದು  ' ಎಬೋಲಾ' ಎಂಬ ಹೆಸರು ಪಡೆಯಿತು . ಆಫ್ರಿಕಾ ಬಿಟ್ಟರೆ ,ಬೇರೆಲ್ಲೂ ಅದಕ್ಕೂ ಮುನ್ನ ಎಬೋಲಾ ವೈರಾಣು ಪತ್ತೆಯಾಗಿರಲಿಲ್ಲ . ಆದರೆ ಆಥೆನ್ಸ್ ನಲ್ಲಿ ಕ್ರಿಸ್ತ ಪೂರ್ವದಲ್ಲಿ ವ್ಯಾಪಕ ಪ್ರಾಣ ಹಾನಿ ಮಾಡಿದ್ದ ಪ್ಲೇಗ್ ನ ಒಂದು ರೂಪವೇ ಎಬೋಲಾ ಆಗಿರಬಹುದು ಎಂದು ಶಂಕಿಸುತ್ತಾರೆ . 
ಹರಡುವುದು    ಹೇಗೆ ?
ಎಬೋಲಾದ ವೈರಾಣುವಿನ ಮೂಲ ಯಾವುದು ಎಂಬುದು ಇದುವರೆಗೂ ಗೊತ್ತಾಗಿಲ್ಲ . ಆದರೆ ,ಎಬೋಲಾ ವೈರಾಣು ಸಾಕುಪ್ರಾಣಿಗಳು ,ಮಂಗ ,ಹಕ್ಕಿಗಳನ್ನು ಬಾಧಿಸಬಲ್ಲವು . ಆದ್ದರಿಂದ ಪ್ರಾಣಿಗಳಿಂದಾಗಿಯೇ ಮನುಷ್ಯರಿಗೂ ಈ ವೈರಾಣು ಹಬ್ಬಿದೆ ಎಂದು ಶಂಕಿಸಲಾಗಿದೆ . ಪರಸ್ಪರ ಸಂಪರ್ಕದಿಂದ ಈ ವೈರಾಣುಗಳು ಶೀಘ್ರ ಹರಡುತ್ತವೆ . ವೈರಾಣು ಬಾಧಿಸಿದ ವ್ಯಕ್ತಿಯೊಂದಿಗೆ ಸಂಗ ,ನೀರು ,ಗಾಳಿಗೆ ತೆರೆದುಕೊಳ್ಳುವುದು ,ರಕ್ತ ,ಸಿರಿಂಜ್ ಬಳಕೆ ಬಳಕೆಯಿಂದಲೂ ಹರಡಬಹುದು . ಒಂದು ವೇಳೆ ನಿರ್ಜನ ಜನವಸತಿ ಇದ್ದಾಗ್ಯೂ ವೈರಾಣು ಹೊಂದಿದ ಪ್ರಾಣಿ /ಪಕ್ಷಿಯಿಂದಗಿಯೂ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ .
ಎಬೋಲಾ ಲಕ್ಷಣಗಳೇನು?
ಎಬೋಲಾ ವೈರಾಣು ದೇಹಕ್ಕೆ ದಾಳಿ ಮಾಡಿದ ಬಳಿಕ ಸಾಮಾನ್ಯ ಜ್ವರ ಕಾಣಿಸಿಕೊಳ್ಳಬಹುದು ಕಫ ,ಗಂಟಲು ನೋವು ,ತಲೆನೋವು ,ಸುಸ್ತು ,ಗಂಟುಗಳಲ್ಲಿ ನೋವು ,ಮಾಂಸಖಂಡಗಳ ನೋವು ,ಎದೆ ನೋವು ಇತ್ಯಾದಿಗಳು ಕಾಣಿಸಿ ಕೊಳ್ಳಬಹುದು . ಕ್ರಮೇಣ ಇದು ಅಧಿಕವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ . ಅಲ್ಲದೇ ಮೂತ್ರಪಿಂಡ ವೈಫ಼ಲ್ಯ ,ಹೃದಯದ ಮೇಲೂ ಪರಿಣಾಮ ಬೀರುತ್ತದೆ . ಜ್ವರ ಹೆಚ್ಚಾದಂತೆ ಬಹು ಅಂಗಾಂಗ ವೈಫ಼ಲ್ಯಕ್ಕಿಡಾಗುವ ಸಾಧ್ಯತೆ ಇರುತ್ತದೆ . ಒಂದು ಬಾರಿ ಎಬೋಲಾ ವೈರಸ್ ದಾಳಿಯಾಗಿ 13 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ . ಇದು 25 ದಿನಗಳವರೆಗೂ ಇರಬಹುದು . 
ಪ್ರಾಣಕ್ಕೆ ಅಪಾಯ ?
ಎಬೋಲಾ 1976 ರಲ್ಲಿ ಕಾಣಿಸಿಕೊಂಡ ಬಳಿಕ 1998ರ ವರೆಗೆ 30,000 ಸಸ್ತನಿಗಳನ್ನು ಬಲಿ ಪಡೆದಿದೆ . ಇದರಲ್ಲಿ 2,073 ಮನುಷ್ಯರೇ ಇದ್ದಾರೆ . ಎಬೋಲಾದಿಂದಾಗುವ ಮರಣ ಪ್ರಮಾಣ ಶೇ. 50ರಿಂದ  ಶೇ.  90ರಷ್ಟಿದೆ . 2001ರಿಂದ 2003ರ ಅವಧಿಯಲ್ಲಿ ಎಬೋಲಾದಿಂದಾಗಿ ಹಲವಾರು ಚಿಂಪಾಂಜಿಗಳು ಮೃತಪಟ್ಟಿದ್ದುವು. ಅಲ್ಲದೇ ಇವು ಮನುಷ್ಯರಿಗೆ ಹಬ್ಬಲೂ ಕಾರಣವಾಗಿದ್ದವು . ನೀರು -ಗಾಳಿ ಅಥವಾ ವೈರಾಣು ಪೀಡಿತ ವ್ಯಕ್ತಿ ಯಾವುದನ್ನು ಮುಟ್ಟಿದರೂ ಹರಡುವ ಗುಣ ಈ ವೈರಾಣುವಿಗೆ ಇರುವುದರಿಂದ ತೀರ ಅಪಾಯಕಾರಿಯಾಗಿ ಪರಿಣಮಿಸಿದೆ .
ಕಾರಣವೇನು ?
 Filoviridae ಎಂಬ ಮೂಲ ವೈರಾಣು ಕುಟುಂಬದಿಂದ ಎಬೋಲಾ ವೈರಸ್ ಜನನವಾಗಿದ್ದು ,ಇದರಲ್ಲಿ Bundibugyo virus (BDBV),Ebola virus (EBOV),Sudan virus (SUDV),Tai Forest virus (TAFV)  ಮತ್ತು ಐದನೆಯ  Reston virus (RESTV) ಎಂಬ ವಿಧಗಳಿವೆ . ಇದರಲ್ಲಿ ಕೊನೆಯ ರೆಸ್ಟನ್  ವೈರಸ್ ಮಾನವರಿಗೆ ಹಾನಿ ಮಾಡುವುದಿಲ್ಲ.  ಉಳಿದೆಲ್ಲವೈರಾಣುಗಳು ಎಬೋಲಾವನ್ನು ತರುತ್ತವೆ .   
 
ಚಿಕಿತ್ಸೆಯೇನು ?  
ಎಬೋಲಾಕ್ಕೆ ನಿರ್ದಿಷ್ಟ ಚಿಕಿತ್ಸೆಯಿಲ್ಲ  ,ಔಷಧವೂ ಲಭ್ಯವಿಲ್ಲ . ರೋಗ ಲಕ್ಷಣವನ್ನು ಅನುಸರಿಸಿ ಸಾಮಾನ್ಯ ಚಿಕಿತ್ಸಾ  ಕ್ರಮವನ್ನೇ ಇದಕ್ಕೂ ಅನುಸರಿಸಲಾಗುತ್ತದೆ . ಆಂಟಿ ಬಯೋಟಿಕ್ ಗಳ ಮೂಲಕ ವೈರಾಣು ದೇಹದ ಅಂಗಾಂಗಳ ಮೇಲೆ ಹಾನಿ ಮಾಡುವುದನ್ನು ನಿಯಂತ್ರಿಸಲಾಗುತ್ತದೆ . ಉಳಿದಂತೆ ರೋಗಿಯನ್ನು ಜನಸಮೂಹದಿಂದ ಪ್ರತ್ಯೇಕವಾಗಿಸುವುದು ,ಆಮ್ಲಜನಕ ಮಟ್ಟದ ವೀಕ್ಷಣೆ ,ರಕ್ತಕಣಗಳಲ್ಲಿ  ಏರು ಪೇರಾಗದಂತೆ ನೋಡುವುದು ಇತ್ಯಾದಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ . ಆಫ್ರಿಕಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೆರವಿನಿಂದ ಹಲವರನ್ನು ಎಬೋಲಾದಿಂದ ಪಾರುಮಾಡಲಾಗಿದ್ದು ಆರೋಗ್ಯವಾಗಿದ್ದಾರೆ . ಆದಾಗ್ಯೂ ಎಬೋಲಾಕ್ಕೆ ನಿರ್ದಿಷ್ಟ ಔಷಧ ಕಂಡುಹಿಡಿಯುವತ್ತ ಸಂಶೋಧಕರ ತಂಡ ಶತಪ್ರಯತ್ನ ಮಾಡುತ್ತಿದೆ.
ವಿಶ್ವಾದ್ಯಂತ ರೆಡ್ ಅಲರ್ಟ್ 
ಎಬೋಲಾ ಪಶ್ಚಿಮ ಆಫ್ರಿಕ ದೇಶಗಳಲ್ಲಿ ಹರಡುತ್ತಿರುವಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ . ಸಿಯಾರ ಲಿಯೋನ್ ದೇಶ ಆರೋಗ್ಯ ತುರ್ತುಪರಿಸ್ಥಿತಿಯನ್ನು  ಘೋಷಿಸಿದ್ದು ,ಸೂಡಾನ್ , ಕಾಂಗೋ , ಉಗಾಂಡ , ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಉಗಾಂಡ ಮುಂತಾದ ದೇಶಗಳು ತಮ್ಮ ನಡುವಿನ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿವೆ . ಇನ್ನು ಈ ದೇಶಗಳಿಂದ ಆಗಮಿಸುವ ಮಂದಿಯನ್ನು ಭಾರಿ ಪರೀಕ್ಷೆಗೊಳಪಡಿಸಲು ಬ್ರಿಟನ್ , ಅಮೇರಿಕ ಸೇರಿದಂತೆ ವಿವಿಧ ಪಾಶ್ಚಾತ್ಯ ದೇಶಗಳು ನಿರ್ಧರಿಸಿದ್ದು ,ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಘೋಷಿಸಿವೆ . ಅಮೇರಿಕಾದಲ್ಲಿ ಎಬೋಲಾದ ಕೆಲ ಪ್ರಕರಣಗಳು ಪತ್ತೆಯಾಗಿದ್ದು ಈ ಬಗ್ಗೆ ಅಲ್ಲಿನ ಆಡಳಿತ ಹಲವು ನಿಯಂತ್ರಣ ಕ್ರಮಗಳನ್ನು ಹಾಕಿಕೊಂಡಿವೆ . 
ಎಬೋಲಾ ವೈರಸ್ 

No comments:

Post a Comment